ಅಪ್ಪಾ ನಿನ್ ಕರದಲ್ಲಿ ನಾನು | Kannada Christian Song | IHPH Bro. Isaiah
Thanks to Prakash Halmidi brother for this Wonderfull Song…
ಅಪ್ಪಾ ನಿನ್ ಕರದಲ್ಲಿ ನಾನು
ಜೇಡಿ ಮಣ್ಣಾಗಿರುವಾಗ
ಆ ಜೇಡಿ ಮಣ್ಣಲ್ಲಿ ನೀನು
ಒಳ್ಳೆ ಪಾತ್ರೆಯ ಮಾಡಿರುವೆ ಅಯ್ಯಾ
ನನ್ನ ಕರಗಳ ತಟ್ಟಿ ತಟ್ಟಿ ಆರಾಧಿಪೆ
ಆರಾಧಿಪೆ ನಿನ್ನನ್ನಾರಾಧಿಪೆ
ಆರಾಧನೆ ನನ್ ಯೇಸಯ್ಯಾ
ಕೊಂಡಾಡುವೆ ನನ್ ಯೇಸಯ್ಯಾ
ಕುಣಿದಾಡುವೆ ನನ್ ಯೇಸಯ್ಯಾ
1. ಕಟ್ಟಲ್ಪಟ್ಟ ಕತ್ತೆಯಾದ ನನ್ನ
ಬಿಡಿಸಿ ಕರೆದಿರುವೆ ನೀನು
ನಿನ್ನನ್ನು ಹೊತ್ತು ಸಾಗುವಂತೆ
ನನ್ನನ್ನು ಉಪಯೋಗಿಸಿರುವೆ
2. ತಪ್ಪಿ ಹೋದ ಮಗನಂತಿದ್ದೆ
ಎಲ್ಲವನ್ನೂ ಕಳೆದುಕೊಂಡು ಬಂದೆ
ನನ್ನೆಲ್ಲಾ ತಪ್ಪುಗಳ ಕ್ಷಮಿಸಿ
ಮತ್ತೆ ಮಗನ ಸ್ಥಾನವನ್ನೆ ಕೊಟ್ಟೆ