ದೇವರಿಗೆ ಭಯಪಡದ ಜನರಿಗೆ_Devarige Bhayapadada Janarige Audio Song_KJVictor, BOUI, Digital Gospel Kannada

ದೇವರಿಗೆ ಭಯಪಡದ ಜನರಿಗೆ_Devarige Bhayapadada Janarige Audio Song_KJVictor, BOUI, Digital Gospel Kannada


#DigitalGospel #BOUI #DigitalGospelKannada
》》》SUBSCRIBE For more SONGS《《《

Track Link ➟

Song Download Link ➟
https://drive.google.com/file/d/1UaknonB0A03tnoaTXkIJ2t_Roj_kzlDk/view?usp=sharing

Song Lyrics ➟
ದೇವರಿಗೆ ಭಯಪಡದ ಜನರಿಗೆ ಕೊನೆಯ ಗಳಿಗೆಯಿದು
ಕರ್ತನ ನಂಬಿದ ಕ್ರೈಸ್ತ ಜನರಿಗೆ ಎಚ್ಚರಿಕೆಯಿದು
ಈ ಪ್ರಕೃತಿಯೇ ದೇವರ ಆಯುಧ, ನಿನ್ನ ಪಾಪವೇ ಇದಕ್ಕೆ ಕಾರಣ
ಬದಲಾಗದಿರುವ ಮನುಜರನ್ ಶಿಕ್ಷಿಸುವುದಕ್ಕೆ ರಭಸದಿಂ ಬರುತಿಹುದು ಈ ಪ್ರಳಯ
ಆತನ ಲೆಕ್ಕಪೂರ್ತಿ ಆಗೋವರೆಗೂ ನಿಲ್ಲದೀ ಪ್ರಳಯ
ಬದಲಾಗು ಮನುಜ ಈ ದಿನ ಇಲ್ಲದಿದ್ದರೆ ಕೊನೆ ದಿನ

ನೀತಿವಂತರು ಇಲ್ಲದಿದ್ದರೆ, ಪಾಪಿಜನರು ಬೆಳೆಯುತ್ತಿದ್ದರೆ
ಎಷ್ಟು ಕಾಲ ಮನುಜರ ಭೂಮಿ ಮೇಲೆ ಉಳಿಸಲಿ
ಮನುಜಗೋಸ್ಕರ ಪರಿತಪಿಸುವ ದೇವರನ್ನು ನಂಬದಿದ್ದರೆ
ಏತಕ್ಕೆ ಈ ಮನುಜರ ಭೂಮಿ ಮೇಲೆ ಉಳಿಸಲಿ
ಅಗ್ನಿ, ನೀರು, ಗಾಳಿ, ಭಾನು, ಭೂಮಿಸಾರವನನುಭವಿಸುತಾ
ಸೃಷ್ಟಿಕರ್ತನ ಧಿಕ್ಕರಿಸಿದರೇ ಪ್ರಕೃತಿಯೇ ಘರ್ಜಿಸದೇ
ಪ್ರಕೃತಿಯೇ ಕಣ್‌ಕೆಂಪು ಮಾಡಿತೆ, ಪರಮಾತ್ಮನೇ ಉಗ್ರನಾದನೇ. ಈ ಪ್ರಕೃತಿಯೇ…

ಮನುಜ ಮನುಜರÀ ಕೊಲ್ಲುತ್ತಿದ್ದರೆ, ಉಗ್ರವಾದವು ಬೆಳೆಯುತ್ತಿದ್ದರೆ
ಮನುಜನೇ ಮೃಗನಾದರೆ, ಎಷ್ಟು ಕಾಲವು ಉಳಿಸಲಿ
ದುಷ್ಟರೆಲ್ಲರೂ ಬೆಳೆಯುತ್ತಿದ್ದರೆ, ರಕ್ತಪಾತವು ನಡೆಯುತ್ತಿದ್ದರೆ
ನರರ ಪಾಪವು ಬೆಳೆದರೇ, ಏತಕೆ ಉಳಿಸಲಿ
ಭೂಮಿ, ಭಾನು ನನ್ನದೆನುತ ದೇವರೆಂದರೆ ಭಯವಪಡದೇ
ಸೃಷ್ಟಿಕರ್ತನ ಧಿಕ್ಕರಿಸಿದರೆ ಪ್ರಕೃತಿಯೇ ಘರ್ಜಿಸದೇ
ಬಿರುಗಾಳಿಯ ತಡೆಯುವ ದಮ್ಮೆ ಇಲ್ಲ ಯಾವ ಮನುಜನಿಗೂ
ಜಲಪ್ರಳಯ ತಡೆಯುವ ದಮ್ಮೆ ಇಲ್ಲ ಅಧಿಕಾರಿಗಳು ಯಾರಿಗೂ. ಈ ಪ್ರಕೃತಿಯೇ…

ದೇವರಿಗೆ ಭಯಪಡದ ಜನರಿಗೆ ಕೊನೆಯ ಗಳಿಗೆಯಿದು
ಕರ್ತನ ನಂಬಿದ ಕ್ರೈಸ್ತ ಜನರಿಗೆ ಎಚ್ಚರಿಕೆಯಿದು.

》》》》》【 ವಿನಂತಿ 】《《《《《
ಈ ಚಾನೆಲ್ ವೀಕ್ಷಿಸುವ ಪ್ರಿಯರಾದ ದೈವ ಜನರೆಲ್ಲರಿಗೂ ಕ್ರಿಸ್ತನ ನಾಮದಲ್ಲಿ ವಂದನೆಗಳು.

ಪ್ರಿಯರೆ,
ಚದುರಿಹೋಗಿರುವ ಎಲ್ಲಾ ಕನ್ನಡ ಭಾಷೆಯ ಆತ್ಮೀಯ ಗೀತೆಗಳು ಒಂದೇ ಕಡೆ ಸುಲಭವಾಗಿ ದೊರೆಯಬೇಕೆಂದು ಮಾಡಿದ ಪ್ರಯತ್ನವೇ ಈ Digital Gospel Kannada YouTube Channel.

ಈ ಚಾನೆಲ್ ನಲ್ಲಿ ಎಲ್ಲಾ ಕನ್ನಡ ಆತ್ಮೀಯ ಗೀತೆಗಳು ನಿಮಗೆ ಸುಲಭವಾಗಿ ಲಭ್ಯವಾಗುತ್ತವೆ, ಮತ್ತು ಇನ್ನು ಸುಲಭವಾಗಿ ಅರ್ಥವಾಗುವದಕ್ಕೋಸ್ಕರ Playlist ಗಳನ್ನು ರಚಿಸಿ Song Upload ಮಾಡಲಾಗುತ್ತದೆ.

ದಯವಿಟ್ಟು ವೀಕ್ಷಿಸಿ, Subscribe ಮಾಡಿ, ಇನ್ನೊಬ್ಬರಿಗೂ ಶೇರ್ ಮಾಡುವುದರ ಮುಖಾಂತರ ಪ್ರೋತ್ಸಾಹಿಸಿ.

ಒಂದು ವೇಳೆ ನಿಮ್ಮ ಬಳಿ ಯಾವುದಾದರೂ ಕನ್ನಡ ಆತ್ಮೀಯ ಗೀತೆಗಳಿದ್ದರೆ, ಅವುಗಳನ್ನು ನಮ್ಮ Channel ನಲ್ಲಿ Upload ಮಾಡುತ್ತೇವೆ.
ನೀವು ಈ ಕೆಳಗಿನ Gmail ಗೆ ನಿಮ್ಮ ಹಾಡನ್ನು ಮತ್ತು ರಚನಾಕಾರರ ವಿವರಗಳನ್ನು ಕಳುಹಿಸಬಹುದು.
ನಮ್ಮ Gmail ID:
digitalgospelkannada@gmail.com

ವಂದನೆಗಳು…..

Trip.com WW

Scroll to Top