ಸುಗ್ಗಿ | Holy God Worshiper’s | Harvest festival | Kannada Christian song |
Kannada lyrics
ಪಲ್ಲವಿ
ಉಳುವವನು ಬೆಳೆಯಲ್ಲಿ ತನಗೆ ಪಾಲು ದೊರಕುವ
ನೀರಿಕ್ಷೆಯಲ್ಲಿ ಉಳಬೇಕು
ಒಕ್ಕುವವನು ಸುಗ್ಗಿಯಲ್ಲಿ ಪಾಲು ತೆಗೆದುಕೊಳ್ಳಲು
ನೀರಿಕ್ಷೆಯಲ್ಲಿ ಒಕ್ಕಬೇಕು ||2||
ಅನು ಪಲ್ಲವಿ
ಹಸನಾದ ಬೆಳೆಯನ್ನು ಪ್ರೀತಿಯಿಂದ ಸ್ವೀಕರಿಸಲು
ಕರ್ತನ ಪ್ರೀತಿ ಇರಬೇಕು ||2||
ಹಲ್ಲೆಲೂಯ ||8||
ಚರಣ
1) ವಾಕ್ಯವೆಂಬುವ ಬೀಜ ಬಿಟ್ಟಬೇಕು
ಪ್ರೀತಿ ಎನ್ನುವ ಪೈರು ಕೊಯ್ಯಬೇಕು
ಹಸನು ಮಾಡಿದ ಆತ್ಮ ಗೆಲ್ಲಬೇಕು
ಪರಲೋಕದ ಕಡೆಗೆ ನಾವು ನಿಲ್ಲಬೇಕು ||2||
ಬೆಳೆಯೂ ಬಹಳವಾಗಿ ಕೆಲಸದವರು ಅಧಿಕವಾಗಿ
ಆತನ ಚಿತ್ತದಂತೆ ನಾವು ನಡೆಯಬೇಕು ||2||
|| ಹಲ್ಲೆಲೂಯ ||
2) ಕಾಯಿನನ ಕಾಣಿಕೆಯ ಇಷ್ಟಪಡದ ದೇವರು
ಹೇಬೆಲನ ಕಾಣಿಕೆಯ ಮೆಚ್ಚಿದಂತ ಕರ್ತನು
ಕೊಡುವ ಮನುಷ್ಯನಿಗಿಂತ ಮನಸು ತುಂಬಾ ಸುಂದರ
ಪಾಪ ಕೊಡುವ ಸಂಬಳದಲ್ಲಿ ದೇಹವೆಲ್ಲ ನಶ್ವರ ||2||
ಒಳ್ಳೆ ಫಲವ ಕೊಡುವ ಸಸಿಯನ್ನು
ಕರ್ತನು ಮೆಚ್ಚಿ ಪ್ರೀತಿಸುವನು
ಫಲವ ಕೊಡದೆ ಇರುವ ಸಸಿಯನ್ನು
ಎಂದಿಗೂ ಕಡಿದು ಹಾಕಲ್ಪಡುವನು
|| ಹಲ್ಲೆಲೂಯ ||
ದೇವರಿಗೆ ಸ್ತೋತ್ರ ಘನ ಮಾನ ಸ್ತುತಿ ಸ್ತೋತ್ರಗಳು
ನಿನಗೆ ಸಲ್ಲಬೇಕು ಕರ್ತನೆ ಆಮೆನ್ 🙏🏻
Try Amazon Fresh