Ene Aadahru | Simon Moses | Kannada Christian Songs | Mahimeya Arasanu | #kannada

Ene Aadahru | Simon Moses | Kannada Christian Songs | Mahimeya Arasanu | #kannada


Praise the lord

Orginal Song Link :- https://youtu.be/efbihVsI_U4

song lyrics :-
ಏನೇ ಆದರೂ ನಾ ಹೇಗೆ ಇದ್ದರೂ ನಿನ್ ಪ್ರೀತಿ ನನ್ನಲ್ಲಿ ಬದಲಾಗದು ಯೇಸಪ್ಪ
ಯಾರೇ ಇದ್ದರೂ ಇಡೀ ಊರೇ ತೊರೆದರೂ
ನಿನ್ ಕೃಪೆಯು ನನ್ನನ್ನು ಕೈಬಿಡದು ಯೇಸಪ್ಪ/2/

ನನ್ನ ಬಿಟ್ಟು ಕೊಡದ ದೇವ
ಪ್ರತಿಕ್ಷಣವೂ ಜೊತೆಯಲ್ಲಿರುವೆ
ನಿನ್ನದೆಲ್ಲ ನನ್ನದೇ , ನನ್ನದೇ ಯೇಸುವೇ,
ನನ್ನ ತಳ್ಳಿ ಬಿಡದ ದೇವಾ
ನಿನ್ನ ಬಿಟ್ಟು ಬಾಳೆನಯ್ಯ
ನನ್ನದೆಲ್ಲಾ ನಿನ್ನದೇ ನಿನ್ನದೇ ಯೇಸುವೇ.

1. ಹರಿದ ಬಟ್ಟೆಯೊಳಗೂ ಹರಿಯದಂತ ಮಹಿಮೆಯನ್ನಿಡುವೆ
ಎಸೆದ ಜಾಗದಲ್ಲೇ ಜನಾಂಗವನ್ನೆಬ್ಬಿಸುವೆ-2
ಊಹೆಗೂ ನಿಲುಕದಂತ ಪ್ರೀತಿಯ ನನಗೆ ಕೊಟ್ಟು
ನಿನ್ ಕೃಪೆಯ ಧಾರೆಯೆರೆದು ನನ್ನ ಹೃದಯದಿ ವಾಸಿಸುವೆ./2
||ನನ್ನ ಬಿಟ್ಟು ಕೊಡದ ದೇವಾ||

2. ಕಷ್ಟ ಕಾಲದಲ್ಲೂ ನೀ ನನ್ನನ್ನು ಕೈಬಿಡಲಿಲ್ಲ.
ಮರಣದ ಹಾದಿಯಲ್ಲೂ ನೀ ನನ್ನನ್ನು ಮರೆಯಲಿಲ್ಲ./2
ನನ್ ಕೊರತೆಯೆಲ್ಲ ನಿಗಿಸಿ ದಿನದಿನವೂ ಪೋಷಿಸಿರುವೆ
ನಿನ್ ಪ್ರೀತಿ ಕರುಣೆಯಿಂದಲೇ ಇಂದು ಜೀವಂತವಾಗಿರುವೆ./2
||ನನ್ನ ಬಿಟ್ಟು ಕೊಡದ ದೇವಾ||

3. ನನ್ನ ನಂಬಿಕೆಯನ್ನು ನೀ ವ್ಯರ್ಥಗೊಳಿಸೋದಿಲ್ಲ
ನನ್ನ ಜೀವನ ಹೀಗೇ ಇದ್ದಂತೆ ಇರೋದೇ ಇಲ್ಲ./2
ನಾ ಸುರಿಸಿದ ಪ್ರತಿ ಕಣ್ಣೀರ ನಿಜ ಕಾರಣ ಅರಿತವನೇ,
ನೀ ಹೇಗೂ ಮಾರ್ಗ ಮಾಡುವೇ ಎಂದು ನಿನ್ನನ್ನೇ ನಂಬಿರುವೆ./2
||ನನ್ನ ಬಿಟ್ಟು ಕೊಡದ ದೇವಾ||
————————————

like
share
comment
subscribe

Trip.com WW

Scroll to Top